ರೇಡಿಯೋ ದೂರದರ್ಶಕ ಎನ್ನುವುದು ಆಕಾಶದಿಂದ ಭೂಮಿಗೆ ಬರುವ ರೇಡಿಯೋ ಅಲೆಗಳನ್ನು ಸಂಗ್ರಹಿಸಿ, ನಾಭಿಸಿ (ಫೋಕಸ್) ವಿಸರಣಾಕರವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ನೆರವಾಗುತ್ತವೆ. ಇದು ಒಂದು ವಿಶೇಷೀಕೃತ ಆಂಟೇನಾ ಮತ್ತು ರೇಡಿಯೋ ರಿಸೀವರ್ ಆಗಿದೆ. ಈ ಕ್ರಿಯೆ ದೃಕ್ ದೂರದರ್ಶಕವು ಬೆಳಕಿನ ಕಿರಣಗಳನ್ನು ನಾಭಿಸುವ ಕ್ರಿಯೆಯಂತೆಯೇ ಉಂಟು-ಅಲ್ಲಿ ಬೆಳಕಿನ ಕಿರಣಗಳು ಇಲ್ಲಿ ರೇಡಿಯೋ ಅಲೆಗಳು. ರೇಡಿಯೋ ಟೆಲಿಸ್ಕೋಪುಗಳ ನೆರವಿನಿಂದ ವಿಶ್ವದ ರೇಡಿಯೊ ಚಿತ್ರವನ್ನು ರಚಿಸುವುದು ಸಾಧ್ಯವಾಗಿದೆ. ಪರವಲಯಾಕಾರದ ಪ್ರತಿಫಲನಕಾರಿ ಈ ಉಪಕರಣದ ಪ್ರಮುಖ ಭಾಗ. ದೊಡ್ಡ ಕುಕ್ಕೆಯನ್ನೊ ಬೋಗುಣಿಯನ್ನೊ ಆಕಾಶದೆಡೆಗೆ ಮುಖಮಾಡಿ ಹಿಡಿದಿರುವಂತೆ ಇದು ಕಾಣುತ್ತದೆ. ಪ್ರಪಂಚದ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಇಂಗ್ಲೆಂಡಿನ ಜೋಡ್ರೆಲ್ ಬ್ಯಾಂಕಿನಲ್ಲಿದೆ (ಲವೆಲ್ ದೂರದರ್ಶಕ). ಇದರ ಪರವಲಯಾಕಾರದ ಪ್ರತಿಫಲನಕಾರಿಯ ವ್ಯಾಸ 250'. == ಉಲ್ಲೇಖಗಳು ==